
Articles
-
4 days ago |
kannadaprabha.com | Girish Linganna
ಎಪ್ರಿಲ್ 2024ರಲ್ಲಿ, ಎಲಾನ್ ಮಸ್ಕ್ ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಭಾರತದಲ್ಲಿ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಟೆಸ್ಲಾ ಕಾರ್ಖಾನೆಯನ್ನು ಸ್ಥಾಪಿಸಲು ಬಹುದೊಡ್ಡ ಹೂಡಿಕೆಯನ್ನು ಘೋಷಿಸುವ ನಿರೀಕ್ಷೆಗಳಿದ್ದವು. ಆದರೆ, ಮಸ್ಕ್ ಕೊನೆಯ ಕ್ಷಣದಲ್ಲಿ ಭಾರತ ಭೇಟಿಯನ್ನು ರದ್ದುಪಡಿಸಿ, ಚೀನಾಗೆ ಭೇಟಿ ನೀಡಲು ನಿರ್ಧರಿಸಿದರು. ಇದು ಭಾರತಕ್ಕೆ ಭಾರೀ ನಿರಾಸೆ ಮೂಡಿಸಿ, ಮಸ್ಕ್ ನಡೆಯ ವಿರುದ್ಧ ಟೀಕೆಗಳು ಎದುರಾದವು.
-
1 week ago |
kannadaprabha.com | Girish Linganna
ಭಾರತ 52 ಮಿಲಿಟರಿ ಉಪಗ್ರಹಗಳನ್ನು ಉಡಾವಣೆಗೊಳಿಸಿ, ಆ ಮೂಲಕ ತನ್ನ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ದೃಢವಾದ ಹೆಜ್ಜೆ ಇಡುತ್ತಿದೆ. ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್ ಅವರು ಎಪ್ರಿಲ್ 7ರಂದು ನವದೆಹಲಿಯಲ್ಲಿ ನಡೆದ ಇಂಡಿಯನ್ ಡಿಫ್‌ಸ್ಪೇಸ್ ಸಿಂಪೋಸಿಯಂನಲ್ಲಿ ಈ ಕುರಿತು ಅಧಿಕೃತ ಘೋಷಣೆ ನಡೆಸಿದರು. ಈ ಯೋಜನೆ ಭಾರತಕ್ಕೆ ತನ್ನ ಗಡಿಗಳ ಕಣ್ಗಾವಲು ನಡೆಸಲು, ಗುಪ್ತಚರ ಮಾಹಿತಿ ಕಲೆಹಾಕಲು, ಮತ್ತು ರಕ್ಷಣಾ ಉದ್ದೇಶಗಳಿಗೆ ಸಂವಹನ ಅಭಿವೃದ್ಧಿ ಪಡಿಸಲು ನೆರವಾಗಲಿದೆ. ಈ ಉಪಗ್ರಹಗಳು ಭಾರತೀಯ ಭದ್ರತಾ ಪಡೆಗಳ ಕಣ್ಣು ಮತ್ತು ಕಿವಿಗಳಾಗಿ ಕಾರ್ಯ ನಿರ್ವಹಿಸಲಿವೆ.
-
2 weeks ago |
kannadaprabha.com | Girish Linganna
ಇರಾನಿಯನ್ ಮಾಧ್ಯಮ ವರದಿಗಳ ಪ್ರಕಾರ, ಇರಾನಿನ ಉನ್ನತ ಕ್ಷಿಪಣಿ ಅಧಿಕಾರಿ, ಬ್ರಿಗೇಡಿಯರ್ ಜನರಲ್ ಆಮಿರ್ ಅಲಿ ಹಾಜಿಸಾದೆ ಅವರು ಹಿರಿಯ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಅಲಿರೇಜಾ಼ ಸಾಬಾಹಿಫರ್ದ್ ಅವರೊಡನೆ ಪರ್ಷಿಯನ್ ಕೊಲ್ಲಿಯ ಆಗ್ನೇಯ ಭಾಗದ ಬಂದರು ನಗರವಾದ ಬಂದರ್ ಅಬ್ಬಾಸ್‌ಗೆ ಶುಕ್ರವಾರ ಭೇಟಿ ನೀಡಿದರು. ವರಿದಿಗಳ ಪ್ರಕಾರ, ಅವರು ಇರಾನ್ ಸಂಭಾವ್ಯ ಯುದ್ಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಎಷ್ಟು ಸಿದ್ಧವಾಗಿದೆ ಎಂದು ಪರೀಕ್ಷಿಸಲು ಈ ಭೇಟಿ ನೀಡಿದ್ದರು. ಪರಿಶೀಲನಾ ಭೇಟಿಯ ಬಳಿಕ ಮಾತನಾಡಿದ ಸಾಬಾಹಿಫರ್ದ್ ಅವರು ಇರಾನಿನ ವಾಯು ರಕ್ಷಣಾ ವ್ಯವಸ್ಥೆ ಸಾಕಷ್ಟು ಬಲವಾಗಿದ್ದು, ಪರ್ವತದಂತೆ ಸ್ಥಿರವಾಗಿದೆ ಎಂದಿದ್ದಾರೆ.
-
3 weeks ago |
kannadaprabha.com | Girish Linganna
ಒಂದು ಕಾಲದಲ್ಲಿ ಕೃಷ್ಣ ಮೆನನ್ ಮತ್ತು ಬಿ ಎಂ ಕೌಲ್ ಅವರು ಯೋಜಿಸಿದ್ದ ಕುತಂತ್ರದಿಂದ ಸ್ಯಾಮ್ ಮಾಣಿಕ್‌ಶಾ ಅವರನ್ನೂ ದೇಶ ದ್ರೋಹಿ ಎಂಬಂತೆ ಬಿಂಬಿಸುವ ಪ್ರಯತ್ನವೂ ನಡೆದಿತ್ತು!ಭಾರತದ ಆಗಿನ ರಕ್ಷಣಾ ಸಚಿವರಾದ ವಿ ಕೆ ಕೃಷ್ಣ ಮೆನನ್ ಮತ್ತು ಸ್ಯಾಮ್ ಮಾಣಿಕ್‌ಶಾ ಅವರ ನಡುವೆ ನಡೆದ ಮೊದಲ ಚಕಮಕಿಯ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿತ್ತು. ಆ ಸಮಯದಲ್ಲಿ ಕೃಷ್ಣ ಮೆನನ್ ಅವರಿಗೆ ಆತ್ಮೀಯರಾಗಿದ್ದ ಲೆಫ್ಟಿನೆಂಟ್ ಜನರಲ್ ಬಿ ಎಂ ಕೌಲ್ ಅವರು ಭಾರತೀಯ ಸೇನೆಯಲ್ಲಿ ಮುಖ್ಯ ಸ್ಥಾನವನ್ನು ಹೊಂದಿದ್ದರು. ಅವರು ಈ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
-
1 month ago |
kannadaprabha.com | Girish Linganna
ಅರುವತ್ತೆರಡು ವರ್ಷಗಳ ಹಿಂದೆ, ಸೋವಿಯತ್ ಒಕ್ಕೂಟದ ವ್ಯಾಲೆಂಟಿನಾ ತೆರೆಷ್ಕೋವಾ ಅವರು ಬಾಹ್ಯಾಕಾಶಕ್ಕೆ ತೆರಳಿದ ಪ್ರಥಮ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಅಂದಿನಿಂದ ಇಂದಿನತನಕ ಬಾಹ್ಯಾಕಾಶಕ್ಕೆ ತೆರಳಿದ ಗಗನಯಾತ್ರಿಗಳ ಪೈಕಿ ಮಹಿಳೆಯರ ಪಾಲು ಕೇವಲ 11% ಅಷ್ಟೇ ಆಗಿದೆ. ಇಂದಿಗೂ ಮಹಿಳಾ ಗಗನಯಾತ್ರಿಗಳ ಪ್ರಮಾಣ ಅತ್ಯಂತ ಕನಿಷ್ಠವಾಗಿರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯಾಚರಿಸುವವರಲ್ಲೂ ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚಾಗಿದೆ.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →X (formerly Twitter)
- Followers
- 376
- Tweets
- 4K
- DMs Open
- Yes