
Articles
-
4 days ago |
mangalorean.com | Shrikanth Hemmady
ಹೊಳ್ಮಗೆ ವಿನೋದಾ ರವಿ ಶೆಟ್ಟಿ ಸಾಂಸ್ಕೃತಿಕ ರಂಗ ‘ ಐಕ್ಯಂಮ್ ‘ ಲೋಕಾರ್ಪಣೆ ಕುಂದಾಪುರ : ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಇರುವ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೂ ಒಳ್ಳೆಯ ಶಿಕ್ಷಣಾವಕಾಶ ದೊರೆತು, ಅವರು ವಿದ್ಯಾವಂತರಾಗಿ, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದ ಆದರ್ಶ ರಾಜಕಾರಣಿ ಯಡ್ತರೇ ಮಂಜಯ್ಯ ಶೆಟ್ಟಿಯವರು ಶಾಸಕರಾಗಿದ್ದ ಕಾಲದಲ್ಲಿ ಆರಂಭವಾಗಿದ್ದ ವಂಡ್ಸೆಯ ಮಲ್ನಾಡ್ ಹೈಸ್ಕೂಲ್ ಶಿಕ್ಷಣಾಸಕ್ತ ಮನಸ್ಸುಗಳಿಗೂ ದೇವಾಲಯವಿದ್ದಂತೆ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
-
2 weeks ago |
mangalorean.com | Shrikanth Hemmady
ಕುಂದಾಪುರ: ಇಲ್ಲಿನ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಆಶ್ರಯದಲ್ಲಿ ನಡೆದ ಅಲ್ಫ್ರೆಡ್ ಡಿಸೋಜಾ ಸ್ಮಾರಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ಅದಿತಿ ಹಾಗೂ ಅಲಿನಾ ಜೋಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆದ ಚಾಂಪಿಯನ್‌ಷಿಪ್‌ನ ವನಿತೆಯರ ವಿಭಾಗದಲ್ಲಿ ಅನುಭವಿ ಆಟಗಾರ್ತಿಯರಾದ ಅದಿತಿ ಆಚಾರ್ಯ ಹಾಗೂ ಅಲಿನಾ ಜೋಡಿ ಪ್ರಿಯಾ ಹಾಗೂ ರಮ್ಯ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
-
3 weeks ago |
mangalorean.com | Shrikanth Hemmady
ಕುಂದಾಪುರ: ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ, ಹಿರಿಯರು ಆರಂಭಿಸಿದ ಸಾಂಪ್ರದಾಯಿಕ ಕಂಬಳಂತಹ ಪಾರಂಪರಿಕ ನಿಲ್ಲಿಸಬಾರದು ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಮುಳ್ಳಿಕಟ್ಟೆ ನಗುಸಿಟಿಯಲ್ಲಿ ಗುರುವಾರ ಸಂಜೆ ಬೈಂದೂರು ತಾಲ್ಲೂಕು ರೈತ ಸಂಘದ ಆಶ್ರಯದಲ್ಲಿ ನಡೆಯುವ ಜೋಡುಕರೆ ಕಂಬಳದ ಪೂರ್ವಭಾವಿ ನಡೆದ ರೈತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾರಂಪರಿಕವಾಗಿ ನಡೆಯುವ ಕಂಬಳ ನಿಂತರೆ ಊರಿಗೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆ ಇದೆ. ರೈತನ ಕೋಣ ಚೆನ್ನಾಗಿದ್ದರೆ ರೈತ ಚೆನ್ನಾಗಿದ್ದಾನೆ ಎಂದರ್ಥ.
-
1 month ago |
mangalorean.com | Shrikanth Hemmady
Kundapur: An 80-year-old farmer, Mahaling Devaraj, tragically lost his life on Saturday afternoon in Kalavara, Badaguddi, within the Kundapur rural police station area, after being caught in a fire while burning agricultural waste. Mr. Devaraj, a resident of Kalavara, was reportedly burning dry leaves and other agricultural debris in his field with his daughter, identified as Baby, for land preparation purposes. According to initial reports, the fire rapidly spread, engulfing the immediate area.
-
1 month ago |
mangalorean.com | Shrikanth Hemmady
ಕುಂದಾಪುರ: ಗದ್ದೆಯಲ್ಲಿ ಕೃಷಿ ತ್ಯಾಜ್ಯ (ಸುಡುಮಣ್ಣು) ಕ್ಕೆ ಬೆಂಕಿ ಹಾಕಿದ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತೆಲ್ಲಾ ಹಬ್ಬಿ ಗದ್ದೆಯಲ್ಲೇ ರೈತನೋರ್ವ ಸಜೀವ ದಹನವಾಗಿ ಸಾವನ್ನಪ್ಪಿದ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಸಾವನ್ನಪ್ಪಿದ ಕೃಷಿಕ. ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಮಹಾಲಿಂಗ ದೇವಾಡಿಗ ಕೃಷಿ ತ್ಯಾಜ್ಯ (ಸುಡುಮಣ್ಣು) ಕ್ಕೆ ಬೆಂಕಿ ಹಾಕಿದ್ದರು.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →