
Articles
-
1 week ago |
kannadaprabha.com | Manjula VN
‘ದಿಯಾ’ ಚಿತ್ರದ ನಂತರ ದೀಕ್ಷಿತ್ ಶೆಟ್ಟಿ ಬೇರೆ ಭಾಷೆಗಳತ್ತ ಪ್ರಯಾಣ ಬೆಳೆಸಿರುವುದು ಗೊತ್ತೇ ಇದೆ. ಈಗಾಗಲೇ ಕೆಲವು ತೆಲುಗು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು ಇದೇ ಮೊದಲ ಬಾರಿಗೆ ವೆಬ್ ಸರಣಿಯಲ್ಲೂ ಅಭಿನಯಿಸಿದ್ದು, ಈ ವೆಬ್ ಸರಣಿಯು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಟಚ್ ಮಿ ನಾಟ್’ ವೆಬ್ ಸೀರಿಸ್ ನಲ್ಲಿ ದೀಕ್ಷಿತ್ ಶೆಟ್ಟಿಯವರು ನಟಿಸಿದ್ದು, ಈ ವೆಬ್ ಸೀರಿಸ್ ಇದೀಗ ಜಿಯೋ ಹಾಟ್‍ಸ್ಟಾರ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ತೆಲುಗು ವೆಬ್ ಸರಣಿಯಾಗಿದ್ದು, ಬೇರೆ ಭಾಷೆಗಳಲ್ಲೂ ಲಭ್ಯವಿದೆ.
-
1 week ago |
kannadaprabha.com | Manjula VN
ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ಮಗುವಿಗೆ ಜ್ವರ ಬಂದಿದೆ ಎಂದು ತಾಯಿಯೊಬ್ಬಳು ಊದುಬತ್ತಿಯಿಂದ ಸುಟ್ಟಿದ್ದು, ಇದರಿಂದ ಮಗು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಅಂತಹದ್ದೇ 18 ಪ್ರಕರಣಗಳು ಬೆಳಕಿಗೆ ಬಂದಿವೆ. ಕನಕಗಿರಿ ತಾಲೂಕಿನ ವಿಠ್ಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು. ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಬಳಿಕ ಫೆ.2ರಂದು ನಡೆದ ಶಿಶು ಮರಣ ತಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು.
-
1 week ago |
kannadaprabha.com | Manjula VN
ಬೆಂಗಳೂರು: ರಾಜ್ಯದಲ್ಲಿ ವರದಿಯಾದ ಪರಿಶಿಷ್ಟ ಜಾತಿಗಳು (SCs) ಮತ್ತು ಪರಿಶಿಷ್ಟ ಪಂಗಡಗಳ (STs) ಮೇಲಿನ ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ತನಿಖೆ ಮಾಡಲು ಕರ್ನಾಟಕದಲ್ಲಿ ಮೀಸಲಾದ ಡಿಸಿಆರ್‌ಇ (ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ) ಪೊಲೀಸ್ ಠಾಣೆ ಸೋಮವಾರದಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. SCs ಮತ್ತು ST ಗಳ ನಾಗರಿಕ ಹಕ್ಕುಗಳನ್ನು ರಕ್ಷಿಸಲು 1974 ರಲ್ಲಿ ರಾಜ್ಯದಲ್ಲಿ ಡಿಸಿಆರ್‌ಇನ್ನು ಸ್ಥಾಪಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕೆಲವು ವಿಷಯಗಳಲ್ಲಿ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರವನ್ನು ಇದು ಹೊಂದಿತ್ತು.
-
1 week ago |
kannadaprabha.com | Manjula VN
ಬೆಂಗಳೂರು: ಬೆಲೆ ಏರಿಕೆಯ ಪರಿಣಾಮ ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿಯುವ ಮೊದಲು ಜನರು ಒಮ್ಮೆ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹಾಲು ಹಾಗೂ ಕಾಫಿ ಪುಡಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಗರದ ಹೋಟಲ್ ಗಳು ಫಿಲ್ಟರ್ ಕಾಫಿಯ ದರಗಳನ್ನು ಪರಿಷ್ಕರಿಸಿದ್ದು, 3-5ರೂ ಹೆಚ್ಚಿವೆ. ಇದರಂತೆ ರೂ.15 ಬೆಲೆಯಿದ್ದ ಒಂದ್ ಕಪ್ ಕಾಫಿಯ ಬೆಲೆ ಇದೀಗ ರೂ.18ಕ್ಕೆ ಏರಿಕೆಯಾಗಿದೆ. ಕೆಲವೆಗೆ ರೂ.20-25ಕ್ಕೆ ಏರಿಕೆಯಾಗಿದೆ.
-
1 week ago |
kannadaprabha.com | Manjula VN
ಬೆಂಗಳೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಎನ್ಕೌಂಟರ್'ನಲ್ಲಿ ಹತನಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ನಟ ಧ್ರುವ ಸರ್ಜಾ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ ಟ್ವೀಟ್ ಮಾಡಿರುವ ಅವರು, ಹುಬ್ಬಳ್ಳಿಯಲ್ಲಿ ಮಗುವನ್ನು ಅತ್ಯಾಚಾರ ಮಾಡಿ ಕೊಂದವನನ್ನು ಎನ್ ಕೌಂಟರ್ ಮಾಡಿದ ಪಿ. ಎಸ್. ಐ ಅನ್ನಪೂರ್ಣ ಮತ್ತು ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯಕ್ತರಾದ ಶ್ರೀ ಎನ್. ಶಶಿಕುಮಾರ ಅವರ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →