Outlet metrics

Domain Authority
47
Ranking

Global

#23668

India

#1768

News and Media

#122

Traffic sources
Monthly visitors

Articles

  • 3 days ago | kannadaprabha.com | Girish Linganna

    ಎಪ್ರಿಲ್ 2024ರಲ್ಲಿ, ಎಲಾನ್ ಮಸ್ಕ್ ಭಾರತಕ್ಕೆ ಭೇಟಿ ನೀಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಭಾರತದಲ್ಲಿ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಟೆಸ್ಲಾ ಕಾರ್ಖಾನೆಯನ್ನು ಸ್ಥಾಪಿಸಲು ಬಹುದೊಡ್ಡ ಹೂಡಿಕೆಯನ್ನು ಘೋಷಿಸುವ ನಿರೀಕ್ಷೆಗಳಿದ್ದವು. ಆದರೆ, ಮಸ್ಕ್ ಕೊನೆಯ ಕ್ಷಣದಲ್ಲಿ ಭಾರತ ಭೇಟಿಯನ್ನು ರದ್ದುಪಡಿಸಿ, ಚೀನಾಗೆ ಭೇಟಿ ನೀಡಲು ನಿರ್ಧರಿಸಿದರು. ಇದು ಭಾರತಕ್ಕೆ ಭಾರೀ ನಿರಾಸೆ ಮೂಡಿಸಿ, ಮಸ್ಕ್ ನಡೆಯ ವಿರುದ್ಧ ಟೀಕೆಗಳು ಎದುರಾದವು.

  • 1 week ago | kannadaprabha.com | Lingaraj Badiger

    ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜನಸಾಮಾನ್ಯರ ವಿರೋಧದ ಹೊರತಾಗಿಯೂ, ಜಂಟಿ ಸಂಸದೀಯ ಸಮಿತಿಯ ಸದಸ್ಯರು ಮತ್ತು ಇತರ ಮಿತ್ರ ಪಕ್ಷಗಳು ಎತ್ತಿದ ಆಕ್ಷೇಪಣೆಗಳನ್ನು ಸರಿಯಾಗಿ ಪರಿಗಣಿಸದೆ ಕೇಂದ್ರ ಸರ್ಕಾರ ವಕ್ಫ್(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ ಎಂದು ಎಡಪಕ್ಷ ತನ್ನ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮೂಲಕ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.

  • 1 week ago | kannadaprabha.com | Nagaraja AB

    ನವದೆಹಲಿ: ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಗೆ ರೂ. 12 ಲಕ್ಷ ದಂಡ ವಿಧಿಸಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬೌಲಿಂಗ್ ಮಾಡಿದೆ. ಐಪಿಎಲ್ ನೀತಿ ಸಂಹಿತೆಯ ನಿಯಮ 2.22 ಅನ್ನು ಉಲ್ಲಂಘಿಸಿದ್ದಕ್ಕಾಗಿ ನಾಯಕ ಅಕ್ಷರ್ ಪಟೇಲ್ ಗೆ ರೂ.12 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

  • 1 week ago | kannadaprabha.com | Lingaraj Badiger

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಾರು ಸ್ಫೋಟಿಸುವುದಾಗಿ ಹೊಸ ಬೆದರಿಕೆ ಸಂದೇಶ ಬಂದ ನಂತರ ಅವರ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಮುಂಬೈ ಪೊಲೀಸರ ಪ್ರಕಾರ, ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡವುದಾಗಿ ಮತ್ತು ಅವರ ಕಾರನ್ನು ಸ್ಫೋಟಿಸುವುದಾಗಿ ವರ್ಲಿ ಸಂಚಾರಿ ಪೊಲೀಸರ ಅಧಿಕೃತ ಸಂಖ್ಯೆಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಈ ಸಂಬಂಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

  • 1 week ago | kannadaprabha.com | Nagaraja AB

    ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕ ಯೋಜನೆ ಜಾರಿಗೊಳಿಸಿದ್ದರಿಂದ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ತಲ್ಲಣಗೊಂಡಿದ್ದು, ಚೀನಾ ಮತ್ತು ಅಮೆರಿಕ ನಡುವಿನ ಸುಂಕ ಸಮರದೊಂದಿಗೆ ಈ ತಿಂಗಳ ಆರಂಭದಿಂದ ಹೂಡಿಕೆದಾರರ ರೂ 11.30 ಲಕ್ಷ ಕೋಟಿ ಸಂಪತ್ತು ಕರಗಿದೆ. BSE ಸೆನ್ಸೆಕ್ಸ್ ಸುಮಾರು ಶೇ. 2 ರಷ್ಟು ಕುಸಿದಿದೆ. ಏಪ್ರಿಲ್ 2 ರಿಂದ ಸೆನ್ಸೆಕ್ಸ್ 1,460.18 ಪಾಯಿಂಟ್ ಅಥವಾ ಶೇ. 1.90 ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್‌ಇ ಪಟ್ಟಿಯಲ್ಲಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ ರೂ.11, 30,627.09 ಕೋಟಿಯಿಂದ ರೂ. 4,01,67,468.51 ಕೋಟಿಗೆ (4.66 ಟ್ರಿಲಿಯನ್ ಡಾಲರ್ ) ಕುಸಿದಿದೆ.

Kannada Prabha journalists