
Articles
-
6 days ago |
kannadaprabha.com | Nagaraja AB
ನವದೆಹಲಿ: ಪಾಕಿಸ್ತಾನಕ್ಕೆ 2.3 ಬಿಲಿಯನ್ ಡಾಲರ್‌ಗಳ ಸಾಲ ನೀಡುವ IMF ನ ಪ್ರಸ್ತಾವನೆಯನ್ನು ಭಾರತ ಶುಕ್ರವಾರ ವಿರೋಧಿಸಿದ್ದು, ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಹಣ ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದೆ. ಅಲ್ಲದೇ, ನಿರ್ಣಾಯಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯಲ್ಲಿ ಮತದಾನದಿಂದ ದೂರ ಉಳಿಯಿತು.
-
6 days ago |
kannadaprabha.com | Nagaraja AB
ರಾವಲ್ಪಿಂಡಿ: ಭಾರತದ ಜೊತೆಗಿನ ಸಂಘರ್ಷವನ್ನು ತಗ್ಗಿಸುವುದಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ. ಭಾರತದ ಮೇಲೆ ಕ್ಷಿಪಣಿ, ಫಿರಂಗಿ, ಡ್ರೋನ್ ದಾಳಿ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ವಕ್ತಾರ ಅಹ್ಮದ್ ಷರೀಫ್ ಚೌಧರಿ, ಎಂದಿಗೂ ಸಂಘರ್ಷ ತಗ್ಗಿಸಲ್ಲ. ಭಾರತ ನಮಗೆ ಯಾವ ರೀತಿ ಹಾನಿ ಮಾಡಿದೆಯೋ ಅದೇ ರೀತಿ ನಾವು ಕೂಡಾ ಮಾಡಲಿದ್ದೇವೆ ಎಂದರು. ಇಲ್ಲಿಯವರೆಗೂ ನಮ್ಮನ್ನು ನಾವು ರಕ್ಷಿಸಿಕೊಂಡಿದ್ದೇವೆ. ಭಾರತಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಸಿಗಲಿದೆ ಎಂದು ತಿಳಿಸಿದರು.
-
6 days ago |
kannadaprabha.com | Nagaraja AB
ಅನಂತಪುರ: ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಭಾರತೀಯ ಸೇನೆಯ ವೀರ ಯೋಧ ಮೂದ್ ಮುರಳಿ ನಾಯ್ಕ್ ಹುತಾತ್ಮರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ದುಃಖದ ಮಡುಗಟ್ಟಿದೆ. ಸುಮಾರು 23 ವರ್ಷ ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022 ರಲ್ಲಿ ಸೇನೆಗೆ ಸೇರಿದ್ದರು ಮತ್ತು AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು (ARMY NO : A3451489H)ಮುರಳಿ ನಾಯಕ್ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಪೋಷಕರಾದ ಎಂ. ಜ್ಯೋತಿಬಾಯಿ ಮತ್ತು ಎಂ. ಶ್ರೀರಾಮ್ ನಾಯ್ಕ್,ದಿನಗೂಲಿ ಕಾರ್ಮಿಕರು.
-
6 days ago |
kannadaprabha.com | Nagaraja AB
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನಮಿಲಿಟರಿ ಸಂಘರ್ಷದಿಂದಾಗಿ, ಶ್ರೀನಗರ ಮತ್ತು ಚಂಡೀಗಢ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ 24 ವಿಮಾನ ನಿಲ್ದಾಣಗಳಲ್ಲಿ ಮೇ 15 ರವರೆಗೆ ನಾಗರಿಕ ವಿಮಾನ ಹಾರಾಟ ಬಂದ್ ಮಾಡಲಾಗಿದೆ. ಏರ್ ಇಂಡಿಯಾ ಮತ್ತು ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಪಾಕ್ ಬೆದರಿಕೆ ಪೀಡಿತ ಸ್ಥಳಗಳಿಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಮರು ಪಾವತಿಯ ಆಫರ್ ನೀಡಿವೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಮೇ 10 ರವರೆಗೆ ನಾಗರಿಕ ವಿಮಾನಗಳಿಗಾಗಿ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು.
-
6 days ago |
kannadaprabha.com | Nagaraja AB
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಮಸೀದಿಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿರುವ ಮಸೀದಿಗಳು ಮತ್ತಿತರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. "ಈ ಕಠಿಣ ಸಮಯದಲ್ಲಿ, ನಾವು ನಮ್ಮ ದೇಶದೊಂದಿಗೆ ನಿಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಬೆಂಬಲಿಸುತ್ತೇವೆ. ಸರ್ಕಾರದ ಜೊತೆ ನಿಲ್ಲುತ್ತೇವೆ.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →