Shankar N. Kenchanuru's profile photo

Shankar N. Kenchanuru

Featured in: Favicon ruralindiaonline.org

Articles

  • 2 months ago | ruralindiaonline.org | Muzamil Bhat |Sarbajaya Bhattacharya |Shankar N. Kenchanuru

    “ಕೇಂದ್ರ ಬಜೆಟ್‌ ಎನ್ನುವುದು ಅಧಿಕಾರಿಗಳಿಗೆ ಮಾತ್ರ” ಎನ್ನುವುದುಅಲಿ ಮೊಹಮ್ಮದ್ ಲೋನ್ ಅವರ ನಂಬಿಕೆ. ಇದರ ಅರ್ಥ ಬಜೆಟ್‌ ಎನ್ನುವುದನ್ನುಮಧ್ಯಮವರ್ಗದ ಸರ್ಕಾರಿ ಲೋಗ್‌ ಅಥವಾ ಸರ್ಕಾರಿ ನೌಕರರಿಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಎನ್ನುವುದುಅವರ ವಿವರಣೆ. ಇದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಈ ಸಣ್ಣ ಬೇಕರಿ ಮಾಲೀಕರು ಬಜೆಟ್‌ ಎನ್ನುವುದು ತನ್ನಂತಹ ಜನರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗುವಸಂಗತಿಯಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.

  • Jan 16, 2025 | ruralindiaonline.org | Sarbajaya Bhattacharya |Binaifer Bharucha |Shankar N. Kenchanuru

    ತೇಜಲಿಬಾಯಿ ದೇಡಿಯಾ ನಿಧಾನವಾಗಿ ಸ್ಥಳೀಯ ಬೀಜಗಳನ್ನು ಮತ್ತೆ ಗಳಿಸುತ್ತಿದ್ದಾರೆ. ಸರಿಸುಮಾರು 15 ವರ್ಷಗಳ ಹಿಂದೆ, ಮಧ್ಯಪ್ರದೇಶದ ಅಲಿರಾಜಪುರ ಮತ್ತು ದೇವಾಸ್ ಜಿಲ್ಲೆಗಳಲ್ಲಿ ಕೃಷಿಯಲ್ಲಿ ತೊಡಗಿದ್ದ ತೇಜಲಿಬಾಯಿ ಸೇರಿದಂತೆ ಭಿಲ್ ಆದಿವಾಸಿಗಳು ಸಾವಯವ ಕೃಷಿ ಪದ್ಧತಿಗಳ ಮೂಲಕ ಬೆಳೆದ ಸ್ಥಳೀಯ ಬೀಜಗಳ ಬದಲಿಗೆ ರಾಸಾಯನಿಕ ಒಳಸುರಿಯನ್ನು ಅವಲಂಬಿಸಿರುವ ಹೈಬ್ರಿಡ್ ಬೀಜಗಳನ್ನು ಬಳಸತೊಡಗಿದರು. ಈ ಬದಲಾವಣೆಯು ಪಾರಂಪರಿಕ ಬೀಜಗಳ ಕಣ್ಮರೆಗೆ ಕಾರಣವಾಯಿತು.

  • Jan 11, 2025 | ruralindiaonline.org | Priti David |Sarbajaya Bhattacharya |Shankar N. Kenchanuru

    "ಮಿರ್ಚಿ, ಲೆಹ್ಸುನ್, ಅದ್ರಕ್... ಸೋರೆಕಾಯಿ, ಕರೇಲ ಎಲೆಗಳು... ಬೆಲ್ಲ." ಇದು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹಾಗಲಕಾಯಿ ಹಾಕಿ ಮಾಡುವ ಅಡುಗೆಯ ಮಾಹಿತಿಯಲ್ಲ. ಸಾವಯವ ಕೃಷಿಕರಾದ ಗುಲಾಬ್‌ ರಾಣಿ ತನ್ನ ಹೊಲಕ್ಕೆ ಬಳಸುವ ಪ್ರಬಲ ರಸಗೊಬ್ಬರ ಮತ್ತು ಕೀಟನಾಶಕಗಳ ಮಾಹಿತಿ. ಪನ್ನಾ ಹುಲಿ ಮೀಸಲು ಪ್ರದೇಶದ ಅಂಚಿನಲ್ಲಿರುವ ಚುಂಗುನಾಗ್ರಾಮದಲ್ಲಿ ಅವರು ಈ ವಸ್ತುಗಳನ್ನು ಬಳಸಿಕೃಷಿ ಮಾಡುತ್ತಾರೆ. 53 ವರ್ಷದಅವರು ತಾನೂ ಈ ಪಟ್ಟಿಯನ್ನು ಮೊದಲ ಸಲ ಕೇಳಿದಾಗ ನಕ್ಕಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ಇದನ್ನೆಲ್ಲಎಲ್ಲಿಂದು ತರುವುದು? ಇದು ನನ್ನಲ್ಲಿ ಮೊದಲು ಮೂಡಿದ ಪ್ರಶ್ನೆ.

  • Jan 10, 2025 | ruralindiaonline.org | Shalini Singh |Shankar N. Kenchanuru

    ಈಗಿನೂ ಮೂವತ್ತರ ಪ್ರಾಯಕ್ಕೆ ಸನಿಹದಲ್ಲಿರುವ ಗಣೇಶ್‌ ಪಂಡಿತ್‌ ಅವರು ಹೊಸ ದೆಹಲಿಯ ಯಮುನಾ ಸೇತುವೆ ಬಳಿಯ ಲೋಹಾ ಪುಲ್‌ ಎನ್ನುವ ಪ್ರದೇಶದ ಅತ್ಯಂತ ಕಿರಿಯ ನಿವಾಸಿ ಎನ್ನಬಹುದು. ಅವರು ಇಂದಿನ ಯುವಕರು ಚಾಂದಿನಿ ಚೌಕ್‌ ಬಳಿ ಈಜು ತರಬೇತಿದಾರರಾಗಿ, ರೀಟೇಲ್‌ ಅಂಗಡಿಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವುದು ಮೊದಲಾದ ʼಮುಖ್ಯವಾಹಿನಿಯʼ ಕೆಲಸಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎನ್ನುತ್ತಾರೆ. ದೆಹಲಿ ಮೂಲಕ ಹರಿಯುವ ಯಮುನಾ ನದಿ ಗಂಗಾ ನದಿಯ ಅತಿ ಉದ್ದದ ಉಪನದಿ. ಮತ್ತು ಪರಿಮಾಣದ ದೃಷ್ಟಿಯಿಂದ ಇದು ಎರಡನೆಯ ಅತಿದೊಡ್ಡ ಉಪನದಿ (ಮೊದಲನೆಯದು ಘಾಘಾರಾ).

  • Jan 3, 2025 | ruralindiaonline.org | Umesh Kumar Ray |Shankar N. Kenchanuru

    ನಾಗರಹಾವೊಂದು ಸಾಗುವಾನಿ (ತೇಗ)ಮರದ ಕೊಂಬೆಗೆ ಗಟ್ಟಿಯಾಗಿ ಸುತ್ತಿಕೊಂಡಿತ್ತು. ರಟ್ಟಿ ತೋಲಾ ಗ್ರಾಮದ ಜನರ ಹಲವು ಪ್ರಯತ್ನಗಳ ನಂತರಅದು ಅಲ್ಲಿ ಅಲುಗಾಡಲಿಲ್ಲ. ಐದು ಗಂಟೆಗಳ ವ್ಯರ್ಥ ಪ್ರಯತ್ನದನಂತರ ಅಸಹಾಯಕರಾದ ಗ್ರಾಮಸ್ಥರು ಹತ್ತಿರದವಾಲ್ಮೀಕಿಹುಲಿಮೀಸಲುಪ್ರದೇಶದಲ್ಲಿಕಾವಲುಗಾರರಾಗಿದ್ದ ಮುಂದ್ರಿಕಾ ಯಾದವ್‌ ಅವರ ಮೊರೆಹೋದರು. ಅವರು ಇದುವರೆಗೆ ಹುಲಿಗಳು,ಚಿರತೆಗಳು,ಖಡ್ಗಮೃಗಗಳು ಮತ್ತು ಹಾವುಗಳುಸೇರಿದಂತೆ 200ಕ್ಕೂ ಹೆಚ್ಚು ಪ್ರಾಣಿಗಳನ್ನು ರಕ್ಷಿಸಿದ್ದಾರೆ. ಮುಂದ್ರಿಕಾ ಬಂದವರೇ ಹಾವನ್ನು ಕೆಳಗೆಇಳಿಸಲು ಪ್ರಯತ್ನಿಸಿದರು, ಮತ್ತು ಅವರು ಅದರಲ್ಲಿ ಯಶಸ್ವಿಯೂ ಆದರು.

Contact details

Socials & Sites

Try JournoFinder For Free

Search and contact over 1M+ journalist profiles, browse 100M+ articles, and unlock powerful PR tools.

Start Your 7-Day Free Trial →