TV9 Kannada

TV9 Kannada

**"For A Better Society"** Tv9 Kannada is a 24-hour free-to-air news channel dedicated to delivering the latest news and updates to its viewers. We recognize that every event shapes world history and that the information shared with the public plays a crucial role in the direction of society. This understanding has guided our approach and content, which is always direct, insightful, and factual, with a focus on the human experience and the goal of “A Better Society.” Since its launch on December 9, 2006, as the first continuous news channel in Kannada history, TV9 has become a trusted name across Karnataka. The channel has quickly earned a place in the hearts of the Kannada audience by consistently introducing innovative ideas and concepts. In line with our mission statement “For a better society,” TV9 strives to identify and address societal issues, amplify the voices of those in distress, and improve the governance system through various investigative reports, including sting operations aimed at uncovering flaws within the system. In a competitive landscape where visual media reigns, TV9 remains committed to providing continuous news coverage without compromising the trust and credibility of its audience. No matter the event or breaking news, we ensure that vital information reaches the public swiftly and reliably.

National
Kannada
Television

Outlet metrics

Domain Authority
30
Ranking

Global

#16545

India

#1231

News and Media

#97

Traffic sources
Monthly visitors

Articles

  • 3 days ago | tv9kannada.com | Madan Kumar

    ನಟ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಮೂಲಕ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ದೊಡ್ಡ ಗ್ಯಾಪ್ ಬಳಿಕ  ಆಮಿರ್ ಖಾನ್ (Aamir Khan) ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿತ್ತು. ಆ ಪೋಸ್ಟರ್ ಅಷ್ಟೇನೂ ವಿಶೇಷವಾಗಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸಿದ್ದರು. ಈಗ ಟ್ರೇಲರ್​ (Sitaare Zameen Par Trailer) ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಅದಕ್ಕೂ ಮುನ್ನವೇ ಟ್ರೇಲರ್ ನೋಡಿರುವ ನಟ ರಿತೇಶ್ ದೇಶಮುಖ್ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

  • 3 days ago | tv9kannada.com | Madan Kumar

    ನಟಿ ನಿತಾಂಶಿ ಗೋಯಲ್ (Nitanshi Goel) ಅವರಿಗೆ ಈಗಿನ್ನೂ 17 ವರ್ಷ ವಯಸ್ಸು. ಈ ಚಿಕ್ಕ ಪ್ರಾಯದಲ್ಲೇ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಅದಕ್ಕೆಲ್ಲ ಕಾರಣ ಆಗಿದ್ದು ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾ. ಕಿರಣ್ ರಾವ್ ನಿರ್ದೇಶನ ಮಾಡಿದ ಆ ಸಿನಿಮಾದಲ್ಲಿ ನಿತಾಂಶಿ ಅವರು ಪ್ರಮುಖ ಪಾತ್ರ ಮಾಡಿದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಈಗ ಅವರಿಗೆ ಇನ್ನೊಂದು ಬಂಪರ್ ಚಾನ್ಸ್ ಸಿಕ್ಕಿದೆ. ಕಾನ್ ಚಿತ್ರೋತ್ಸವದ (Cannes Film Festival) ರೆಡ್​ ಕಾರ್ಪೆಟ್​ನಲ್ಲಿ ನಿತಾಂಶಿ ಗೋಯಲ್ ಅವರು ಹೆಜ್ಜೆ ಹಾಕಲಿದ್ದಾರೆ.

  • 3 days ago | tv9kannada.com | Madan Kumar

    ಕೆಲವೇ ದಿನಗಳ ಹಿಂದೆ ಬಾಲಿವುಡ್ (Bollywood) ನಟ ಗೋವಿಂದ ಅವರ ದಾಂಪತ್ಯದ ಬಗ್ಗೆ ಗಾಸಿಪ್ ಕೇಳಿಬಂದಿತ್ತು. ಅವರ ಸಂಸಾರದಲ್ಲಿ ಸಾಮರಸ್ಯ ಹಾಳಾಗಿದೆ ಎಂದು ಸುದ್ದಿ ಹಬ್ಬಿತ್ತು. ಈಗಾಗಲೇ ಡಿವೋರ್ಸ್​ ನೋಟಿಸ್ ಕಳಿಸುವ ಹಂತಕ್ಕೆ ಕಿರಿಕ್ ಶುರುವಾಗಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಂಡರು. ಆದರೆ ಆ ರೀತಿ ಏನೂ ಆಗಲೇ ಇಲ್ಲ. ಅದರ ನಡುವೆ ಗೋವಿಂದ ಬಗ್ಗೆ ಅವರ ಪತ್ನಿ ಸುನೀತಾ ಅಹುಜಾ (Sunita Ahuja) ಅವರು ನೀಡಿದ ಹೇಳಿಕೆ ಈಗ ಸುದ್ದಿ ಆಗುತ್ತಿದೆ. ಚಿತ್ರರಂಗದಲ್ಲಿ ಗೋವಿಂದ (Govinda) ಆ್ಯಕ್ಟೀವ್ ಆಗಿಲ್ಲ ಎಂಬುದು ಸುನೀತಾ ಅವರ ಅಸಮಾಧಾನಕ್ಕೆ ಕಾರಣ ಆಗಿದೆ.

  • 4 days ago | tv9kannada.com | Madan Kumar

    ನಟ ರಾಮ್ ಚರಣ್ (Ram Charan) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ಬೇರೆ ದೇಶಗಳಲ್ಲಿ ಕೂಡ ಅಭಿಮಾನಿಗಳು ಇದ್ದಾರೆ. ‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಮ್ ಚರಣ್ ಖ್ಯಾತಿ ಇನ್ನಷ್ಟು ಹೆಚ್ಚಾಯಿತು. ಈಗ ಅವರಿಗೆ ಇನ್ನೊಂದು ಗೌರವ ಸಿಕ್ಕಿದೆ. ಪ್ರತಿಷ್ಠಿತ ಮೇಡಂ ಟುಸಾಡ್ಸ್​ (Madame Tussauds) ಮೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆಯನ್ನು (Ram Charan Wax Statue) ಅನಾವರಣ ಮಾಡಲಾಗಿದೆ. ರಾಮ್ ಚರಣ್ ಅವರು ಕುಟುಂಬದವರ ಜೊತೆ ಲಂಡನ್​ಗೆ ತೆರಳಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  • 4 days ago | tv9kannada.com | Madan Kumar

    ಟಾಲಿವುಡ್​ ನಟ ಜೂನಿಯರ್ ಎನ್​ಟಿಆರ್ (Jr NTR) ಅವರ ಯಾವಾಗಲೂ ಕೂಲ್ ಆಗಿ ಇರುತ್ತಾರೆ. ಆದರೆ ಅವರು ತಾಳ್ಮೆ ಕಳೆದುಕೊಳ್ಳುವಂತಹ ಘಟನೆ ಲಂಡನ್​ನಲ್ಲಿ ನಡೆದಿದೆ. ಅಭಿಮಾನಿಗಳು ಅತಿ ಉತ್ಸಾಹದಲ್ಲಿ ಗದ್ದಲ ಮಾಡಿದಾಗ ಜೂನಿಯರ್ ಎನ್​ಟಿಆರ್​ ಕೋಪಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ರಾಮ್ ಚರಣ್ ಅವರ ಅಭಿಮಾನಿಗಳು ಕೂಡ ಲಂಡನ್​ನಲ್ಲಿ ಮಿತಿ ಮೀರಿ ನಡೆದುಕೊಂಡಿದ್ದರು. ಈಗ ಜೂನಿಯರ್ ಎನ್​ಟಿಆರ್ ಅವರ ಫ್ಯಾನ್ಸ್ (Jr NTR Fans) ಕೂಡ ಕಿರಿಕಿರಿ ಉಂಟುಮಾಡಿದ್ದಾರೆ. ಇಂಥ ಘಟನೆಗಳಿಂದ ವಿದೇಶದಲ್ಲಿ ಭಾರತದ ನಟರು ಮುಜುಗರಕ್ಕೆ ಒಳಗಾಗುವಂತಾಗಿದೆ.

TV9 Kannada journalists